ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ ಸುದ್ದಿ UPDATE

ನಿನ್ನೆ ಕೆಮಿಕಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಮೈಸೂರು ರಸ್ತೆ-ತುಮಕೂರು ರಸ್ತೆ ಮಧ್ಯೆ ಬೃಹತ್ ಟ್ಯಾಂಕರ್ ಪಲ್ಟಿಯಾಗಿದೆ.ಇದರಿಂದ 
ಟ್ಯಾಂಕರ್ ನಲ್ಲಿ ಥಯೋನಿಲ್ ಕೆಮಿಕಲ್ ಸಾಗಿಸಲಾಗುತ್ತಿತ್ತು. ಟ್ಯಾಂಕರ್ ಮಧ್ಯಪ್ರದೇಶದಿಂದ ಬೆಂಗಳೂರು ಮಾರ್ಗವಾಗಿ ತಮಿಳುನಾಡಿತ್ತ ತೆರಳುತ್ತಿತ್ತು.ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಸ್ಥಳದಲ್ಲಿ 2 ಅಗ್ನಿಶಾಮಕ ವಾಹನಗಳು ಮೊಕ್ಕಾಂ ಹೂಡಿದೆ. ಘಟನಾ ಸ್ಥಳದಲ್ಲಿ ಕೆಂಗೇರಿ ಪೊಲೀಸರೂ ಸಹ ಉಪಸ್ಥಿತರಿದ್ದಾರೆ. 

ನಿನ್ನೆ ಸಂಜೆ ವೇಳೆ ನೈಸ್ ರಸ್ತೆಯಲ್ಲಿ ಟ್ಯಾಂಕರ್ ಪಲ್ಟಿಯಾಗಿತ್ತು. ರಾಸಾಯನಿಕ ಇರುವ ಹಿನ್ನೆಲೆಯಲ್ಲಿ ಟ್ಯಾಂಕರ್ ತೆರವು ಕಾರ್ಯ ವಿಳಂಬವಾಗಿದೆ. ಮಧ್ಯಪ್ರದೇಶ ಮೂಲದ ಕಂಪನಿಗೆ ಸೇರಿದ ರಾಸಾಯನಿಕವಾಗಿದೆ. ಸಿಬ್ಬಂದಿಗಳು ಕೆಮಿಕಲ್ ಕಂಪನಿ ಅಧಿಕಾರಿಗಳಿಗಾಗಿ ಕಾಯುತ್ತಿದ್ದಾರೆ.


ಟ್ಯಾಂಕರ್ ನಿಂದ ಥಯೋನಿಲ್ ಕೆಮಿಕಲ್ ಸೋರಿಕೆ ಪರಿಣಾಮ ಟ್ಯಾಂಕರ್ ಬಿದ್ದಿರುವ 200ಮೀ ವ್ಯಾಪ್ತಿಯಲ್ಲಿ ದುರ್ನಾತ ಹಬ್ಬಿದೆ. ಟ್ಯಾಂಕರ್ ನಲ್ಲಿದ್ದ ಶೇ.50ರಷ್ಟು ರಾಸಾಯನಿಕ ಸೋರಿಕೆಯಾಗಿದೆ. ಥಯೋನಿಲ್ ಕೆಮಿಕಲ್ ಸೋರಿಕೆಯಿಂದಾಗಿ ಹಲವು ತೊಂದರೆಗಳಾಗುವ ಸಾಧ್ಯತೆಯಿದೆ. ಅನಿಲ ಸೋರಿಕೆ ಪರಿಣಾಮ ಸಮೀಪದ ನಿವಾಸಿಗಳಲ್ಲಿ ಕಣ್ಣು ಉರಿ, ಉಸಿರಾಟ ತೊಂದರೆ ಎದುರಾಗುವ ಸಂಭವವಿದೆ. ನೇರವಾಗಿ ಕೆಮಿಕಲ್ ದೇಹ ಸೇರಿದರೆ ಹಲವು ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕೆಮಿಕಲ್ ಸೋರಿಕೆ ತಡೆಯಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.


ಒನ್ ವೇ ಸಂಚಾರ
ಮುನ್ನೆಚ್ಚರಿಕೆಯಿಂದ ನೈಸ್ ರಸ್ತೆಯಲ್ಲಿ ಒನ್ ವೇ ಸಂಚಾರ ಮಾಡಲಾಗಿದೆ. ಮಾಗಡಿ ರಸ್ತೆಯಿಂದ ಕಂಗೇರಿಗೆ ತೆರಳುವ ಮಾರ್ಗ ಬಂದ್ ಮಾಡಲಾಗಿದೆ. ಕಂಗೇರಿಯಿಂದ ಮಾಗಡಿರಸ್ತೆ ಕಡೆ ಮಾತ್ರ ವಾಹನಸಂಚಾರವಿದೆ.

ಪಲ್ಟಿಯಾದ ಟ್ಯಾಂಕರ್ ಮಧ್ಯಪ್ರದೇಶದಿಂದ ತಮಿಳುನಾಡಿನ ಕಡಲೂರಿನಲ್ಲಿರು ಟ್ಯಾಗೋರ್ ಇಂಡಿಯಾ ಪ್ರೈ.ಲಿ. ಕಂಪನಿಗೆ ತೆರಳುತ್ತಿತ್ತು. ಲ್ಯಾನೆಕ್ಸ್ ಇಂಡಿಯಾ ಪ್ರೈ ಲಿಮಿಟೆಡ್ ಸೇರಿದ ಕೆಮಿಕಲ್ ಆಗಿದೆ. ಟ್ಯಾಂಕರ್ ತೆರವುಗೊಳಿಸಲು ಎನ್ ಡಿ ಆರ್ ಎಫ್ ತಂಡ ಸಿದ್ಧತೆ ನಡೆಸುತ್ತಿದೆ. 

0 comments:

Post a Comment