ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಹೆಚ್ಚು ಬಿಸ್ಕತ್ತುಗಳನ್ನು.. ತಂದಾಗ ತುಂಬಾ ದಿನಗಳವರೆಗೂ ಗರಿಗರಿಯಾಗಿ ಇರಬೇಕಾದರೆ ಅಕ್ಕಿ ಡಬ್ಬದಲ್ಲಿ ಹಾಕಿಡಬೇಕು.
ಬೆಳ್ಳಿ ಪಾತ್ರೆಗಳನ್ನು ಹಾಲಿನಲ್ಲಿ ತೊಳೆಯುವುದರಿಂದ ಅದ್ಭುತವಾಗಿ ಹೊಳೆಯುತ್ತದೆ.
ತುಪ್ಪದ ಬಾಟಲಿನಲ್ಲಿ ನಾಲ್ಕಾರು ಕಾಳುಮೆಣಸು ಹಾಕುವುದರಿಂದ ತುಪ್ಪ ತುಂಬಾ ದಿನ ಬಾಳಿಕೆ ಬರುತ್ತದೆ.

ಹುಣಸೆ ಹಣ್ಣನ್ನು ನೆನೆ ಹಾಕಲು ಜಾಸ್ತಿ ಸಮಯ ಇರದಿದ್ದಾಗ ಬಿಸಿ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ. ಕೇವಲ 2ರಿಂದ 3 ನಿಮಿಷದಲ್ಲಿ ಹುಣಸೆ ರಸ ಬೀಡುತ್ತದೆ.

ರಸಂ, ಸಾಂಬಾರ್ ಮಾಡುವಾಗ ಇಂಗು ಬಳಸುವುದು ಸಾಮಾನ್ಯ. ಇಂಗು ಜೀರ್ಣಕಾರಕ. ಆದರೆ ಇಂಗು ಬಳಸುವುದು ಹೇಗೆ? ಇಂಗುವನ್ನು ಹೇಗೆಂದರೆ ಹಾಗೆ ಬಳಸಿದರೆ ಉಪಯೋಗವಿಲ್ಲ. ಇಂಗು ಸುವಾಸನೆ, ಜೀರ್ಣಕಾರಕವಾಗಿ ಇರಬೇಕಾದರೆ ಸಾರು ಕುದಿ ಬರುವಾಗ ಇಂಗು ಹಾಕಿದರೆ ಉತ್ತಮ.
ಅಡುಗೆಯ ಜೊತೆ ಬಳಸುವ ಕರಿಬೇವನ್ನು ತಿನ್ನುವುದರಿಂದ ರಕ್ತದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚುತ್ತದೆ.
ತಿನ್ನುವ ಪಾದಾರ್ಥಗಳಿಗೆ ಬಣ್ಣಗಳನ್ನು ಬಳಸಬೇಡಿ. ಹಾಗೆ ಮಾಡುವುದರಿಂದ ಅಡುಗೆಯ ರುಚಿ ಕೆಡುವುದು.
ಸಾರು ಕುದಿಯುವಾಗ ಕೊತ್ತಂಬರಿ ಸೊಪ್ಪು ಹಾಕಿದರೆ ತುಂಬಾ ರುಚಿ.
ಬಂಗಾರದ ಆಭರಣಗಳನ್ನು ತೊಳೆಯುವಾಗ ಹಲ್ಲುಜ್ಜುವ ಪೇಸ್ಟ್ ಬಳಸಿ ತೊಳೆದರೆ ಆಭರಣಗಳು ಫಳಫಳ ಹೊಳೆಯುತ್ತದೆ.
ಸಾರಿಗೆ ಉಪ್ಪು ಜಾಸ್ತಿಯಾದರೆ ಒಂದು ತುತ್ತು ಅನ್ನವನ್ನು ಉಂಡೆ ಕಟ್ಟಿ ಸಾರಿನಲ್ಲಿ ಬಿಡಿ. ಆಗ ಸಾರಿನಲ್ಲಿ ಉಪ್ಪಿನ ಅಂಶ ಕಡಿಮೆಯಾಗುತ್ತದೆ.
ಕೊತ್ತಂಬರಿ ಸೊಪ್ಪಿನ ಕಾಂಡದ ಭಾಗವನ್ನು ಸಾರು ಕುದಿಯುವಾಗ ಹಾಕಿದರೆ ಸಾರಿನ ರುಚಿ ಹೆಚ್ಚುವುದು.

0 comments:

Post a Comment