ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:23 PM

ವೇಣೂರು ವಲಯ ಸಭೆ

Posted by ekanasu

ಪ್ರಾದೇಶಿಕ ಸುದ್ದಿ
ವೇಣೂರು: ಹವ್ಯಕ ವಲಯ ವೇಣೂರು ಇದರ ಮಾಸಿಕ ಸಭೆ ನಮ್ಮ ಮನೆ ಹವ್ಯಕ ಭವನದಲ್ಲಿ ರವಿವಾರ ನಡೆಯಿತು. ಅಧ್ಯಕ್ಷತೆಯನ್ನು ವಲಾಯಧ್ಯಕ್ಷ ಪರಮೇಶ್ವರ ಭಟ್ ವಹಿಸಿದ್ದರು. ಮೇ 10ರಿಂದ 13ರ ತನಕ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಯೋಜನೆಯಲ್ಲಿ ಸಿದ್ದಾಪುರದ ಶ್ರೀರಾಮದೇವ ಭಾನ್ಕುಳಿ ಮಠದಲ್ಲಿ ನಡೆಯಲಿರುವ ಶಂಕರ ಪಂಚಮೀ ಕಾರ್ಯಕ್ರಮದಲ್ಲಿ ಹಾಗೂ ಮೇ 2ರಿಂದ 7ರ ತನಕ ಪೆರಾಜೆ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ  ನಡೆಯುವ ವಾರ್ಷಿಕೋತ್ಸವ, ಸೂತ್ರಸಂಗಮ ಕಾರ್ಯಕ್ರಮದಲ್ಲಿ ವಲಯದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದರು.

ಪ್ರಸಾರಶಾಖೆ ಪ್ರತಿನಿಧಿ ಹರೀಶ್ ಆದೂರು ಕಾಮದುಘಾ ಪತ್ರಿಕೆಯ ವಿವರ ನೀಡಿದರು.
ಕಾರ್ಯದರ್ಶಿ  ಹನ್ಯಾಡಿ ಗೋಪಾಲಕೃಷ್ಣ ಭಟ್ ವಲಯ ಡೈರೆಕ್ಟರಿಯ ಮಾಹಿತಿ ನೀಡಿದರು. ಕೋಶಾಧಿಕಾರಿ ಶಿವಪ್ರಸಾದ್ ಭಟ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

0 comments:

Post a Comment