ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:51 PM

ಅಸಹಕಾರ ಚಳುವಳಿ

Posted by ekanasu


ಬೆಂಗಳೂರು ಪ್ರತಿನಿಧಿ ವರದಿ

ಆಮ್ನೆಸ್ಟಿ ಸಂಸ್ಥೆ ನಿಷೇಧಕ್ಕೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಭಾರತೀಯ ಸೇನೆ ವಿರುದ್ಧ ಆಕ್ಷೇಪಾರ್ಹ ಘೋಷಣೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ಎಬಿವಿಪಿ  ಅಸಹಕಾರ ಚಳುವಳಿಯನ್ನು ಕೈಗೊಂಡಿದೆ. ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ  ಸಾಧ್ಯತೆ ಇದೆ. ಪ್ರತಿಭಟನೆಯಲ್ಲಿ ಸುಮಾರು 5 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.ವಿದ್ಯಾರ್ಥಿಗಳು ರ್ಯಾಲಿ ಮೂಲಕ ಆಗಮಿಸಲಿದ್ದಾರೆ.
ನಗರದಲ್ಲಿ ಖಾಕಿ ಕಣ್ಗಾವಲು

ಎಬಿವಿಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.  ಬೆಂಗಳೂರಿನ ಫ್ರೀಡಂಪಾರ್ಕ್, ಮೈಸೂರು ಬ್ಯಾಂಕ್, ಮೌರ್ಯ ಸರ್ಕಲ್, ವಿಧಾನಸೌಧ, ರಾಜಭವನ, ಚಾಲುಕ್ಯ ಸರ್ಕಲ್ ಸೇರಿದಂತೆ ಪ್ರಮುಖ ಕಡೆ ಬಿಗಿಭದ್ರತೆ ಮಾಡಲಾಗಿದೆ.
....................

0 comments:

Post a Comment