ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರಶ್ರೀ ಗೋಸಂದೇಶ

ಬೆಂಗಳೂರು: ಜೀವನದ ಪರಮಗುರಿ ಅದ್ವೈತ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅದ್ವೈತ ಅಂದರೆ ಎರಡಿರಬಾರದು, ಬ್ರಹ್ಮ-ಜೀವ, ಸಿಂಧು-ಬಿಂದು ಒಂದಾಗಬೇಕು. ಅದೇ ಮುಕ್ತಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಮುಕ್ತಿಯನ್ನು ಪಡೆಯಲು ಅದ್ವೈತವನ್ನು ಅನುಭವಿಸಬೇಕು. ದೇವನಲ್ಲಿ ಸೇರುವ ಮೊದಲು ಜೀವ ಜೀವಗಳಲ್ಲಿ ಅದ್ವೈತವಾಗಬೇಕು.

ಗೋಮಾತೆಯನ್ನು ಅಭ್ಯಾಸ ಮಾಡಿದಾಗ ಮುಕ್ತಿ ಸಿಗುತ್ತದೆ. ದೇವ ಮತ್ತು ಜೀವ ಎರಡೂ ಗೋವಿನಲ್ಲಿರುತ್ತದೆ. ಗೋವನ್ನು ಪೂಜಿಸುವುದರಿಂದ ಮುಕ್ತಿ ಸಿಗುತ್ತದೆ. ಅಂತಹ ಗೋವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಉತ್ತರಪ್ರದೇಶದ ಲಿಖಿಮ್ ಪುರ್, ಕಬೀರ್ ಪಂಥ,  ಶ್ರೀ ಸದ್ಗುರು ಸೇವಾಶ್ರಮದ ಸಂತ ಅಸಂಗ ಸಾಹೇಬ ತಮ್ಮ ಸಂತ ಸಂದೇಶದಲ್ಲಿ,  ಭಾವನೆಗಳು ಶ್ರೇಷ್ಠವಾಗಿದ್ದಾಗ ಭಾಷೆಯ ಹಂಗು ಇರುವುದಿಲ್ಲ. ಗೋ-ಮಾತೆಯ ಸೇವೆಗೆ ಭಾಷೆಯ ಅವಶ್ಯಕತೆ ಇಲ್ಲ. ಗೋ-ಮಾತೆಯ ಸೇವೆ ಮಾಡಿದರೆ ಎಲ್ಲ ಪುಣ್ಯತೀರ್ಥಗಳ ಸೇವನೆ ಮಾಡಿದ ಫಲ ಲಭಿಸುತ್ತದೆ. ಸೇವೆ ನಮ್ಮ ಧರ್ಮ, ಕರ್ಮವಾಗಲಿ. ಸೇವೆ ಮಾಡುವ ಅವಕಾಶ ನಮಗೆಲ್ಲ ಎಂದಿಗೂ ಇರಲಿ. ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಗೋ-ಸಂಕುಲವನ್ನು ರಕ್ಷಿಸಿದ ಹಾಗೇ ಕಲಿಯುಗದಲ್ಲಿ ರಾಘವೇಶ್ವರಭಾರತಿಯವರು ಗೋ-ಸಂತತಿಯನ್ನು ರಕ್ಷಿಸುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳಿಗೆ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸಿತ್ತಿರುವ ಹಾಗೂ ಪಾರಂಪರಿಕ ಗೋ-ಸಂಬಂಧಿತ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿ ರಾಜ್ಯಾದ್ಯಂತ ಪರ್ಯಟನೆ ಮಾಡುತ್ತಿರುವ ನಿತ್ಯ ಗೋಸೇವಕ ಕ. ದಾ. ಕೃಷ್ಣರಾಜ ಅರಸ್ ಇವರಿಗೆ ಗೋ ಸೇವಾ ಪುರಸ್ಕಾರವನ್ನು ನೀಡಲಾಯಿತು.

     ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ ಮನೋರಮಾ ಬಿ. ಎನ್. ಬರೆದ "ನಂದಿಕೇಶ್ವರ" ಪುಸ್ತಕವನ್ನು ಸಂತ ಅಸಂಗ ಸಾಹೇಬ ಲೋಕಾರ್ಪಣೆ ಮಾಡಿದರು.

     ಅಪ್ಸರಕೊಂಡ, ಮುಗ್ವಾ, ಗೇರುಸೊಪ್ಪ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀ ಶ್ರೀ ರಾಮಚಂದ್ರ ಗುರೂಜಿ, ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರಾಘವೇಂದ್ರ ಹೆಗಡೆ ಕಡ್ನಮನೆ ನಿರೂಪಿಸಿದರು. ಅನಂತರ ಕುಮಾರಿ ಅಶ್ವಿನಿ ಭಟ್ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು.

      ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀದುರ್ಗಾ ತ್ರಿಕಾಲ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.

0 comments:

Post a Comment