ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಉಚಿತ ಮಧುಮೇಹ ಶಿಬಿರ- ಮಧುಮೇಹ ಮುಕ್ತ ಭಾರತ ಜನಜಾಗೃತಿ ಅಭಿಯಾನ
ಗಂಜೀಮಠ: ರಾಷ್ಟ್ರೀಯ ಆಯುರ್ವೇದ ದಿನದ ಅಗಂವಾಗಿ ಗಂಜೀಮಠದ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯ ವತಿಯಿಂದ ಅಕ್ಟೋಬರ್ 28ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರ ನಡೆಯಲಿದೆ.
ಮಧುಮೇಹ ನಿಯಂತ್ರಣ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದದ ಪಾತ್ರ ಎಂಬ ವಿಷಯದ ಬಗ್ಗೆ ಈ ಸಂದರ್ಭದಲ್ಲಿ ವಿಶೇಷ ಮಾಹಿತಿ ಶಿಬಿರ ನಡೆಯಲಿದೆ.




ಗಂಜೀಮಠದ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆಯ ವಠಾರದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ತನಕ ಕಾರ್ಯಕ್ರಮ ನಡೆಯಲಿದೆ. ಹಿರಿಯ ಪುರೋಹಿತ ಶ್ರೀಪತಿ ಭಟ್ ನಾರ್ಲಪದವು ಶಿಬಿರದ ಉದ್ಘಾಟನೆ ನಡೆಸುವರು. ವಾರ್ತೆ.ಕಾಂ ನ ಪ್ರಧಾನ ಸಂಪಾದಕ ಹರೀಶ್ ಕೆ.ಆದೂರು, ಗಂಜೀಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ತಾಲೂಕು ಪಂಚಾಯತ್ ಸದಸ್ಯ ಸುನೀಲ್ ಅತಿಥಿಗಳಾಗಿ ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆಯಬೇಕಾಗಿ ಡಾ.ಸತೀಶ್ ಶಂಕರ್ ಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 comments:

Post a Comment