ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...500 ರೂ. ಮತ್ತು 1000ರೂ, ನೋಟ್ ಗಳ ಚಲಾವಣೆ ರದ್ದು ಹಿನ್ನೆಲೆಯಲ್ಲಿ ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. 500 ರೂ. ಮತ್ತು 1000ರೂ.ಗೆ ಚಿಲ್ಲರೆ ಹಣ ಸಿಗುತ್ತಿಲ್ಲ. ತಿಂಡಿ, ವಾಟರ್ ಬಾಟಲ್ ಗಾಗಿ ಪರದಾಟ ನಡೆಸುತ್ತಿದ್ದಾರೆ.
ಚಿಲ್ಲರೆ ಸಿಗದ ಕಾರಣ ಟ್ಯಾಕ್ಸಿ, ಆಟೋ ಸಂಚಾರ ಸ್ಥಗಿತವಾಗಿದೆ. ಇಂದು ಮತ್ತು ನಾಳೆ ಎಟಿಎಂ ಕೂಡ ಕಾರ್ಯನಿರ್ವಹಿಸುವುದಿಲ್ಲ. ಆದ್ರೆ ಅಕ್ಕಪಕ್ಕದ ಕೆಲವು ಎಟಿಎಂಗಳಲ್ಲಿ ಹಣ ಡ್ರಾ ಆಗುತ್ತಿದೆ. ಆದರೆ ಆ ಎಟಿಎಂಗಳಲ್ಲಿ ಡ್ರಾ ಆಗುತ್ತಿರುವುದು 500 ರೂ. ಮತ್ತು 1000ರೂ. ನೋಟುಗಳಾಗಿದೆ. ಇದು ಉಪಯೋಗಕ್ಕೂ ಬರುವುದಿಲ್ಲ.


ಹಲವೆಡೆ ಹೋಟೆಲ್ ಗಳಲ್ಲಿ ಗ್ರಾಹಕರು ತೀವ್ರವಾಗಿ ಪರದಾಟ ನಡೆಸುತ್ತಿದ್ದಾರೆ. 500 ರೂ. ಮತ್ತು 1000ರೂ.ಗಳ ಮುಖಬೆಲೆ ನೋಟುಗಳನ್ನು ಹೋಟೆಲ್ ಗಳು ಸ್ವೀಕರಿಸುವುದಿಲ್ಲ. ಚಿಲ್ಲರೆ ಹೊಂದಿಸಲಾಗದೆ ಹೋಟೆಲ್ ಗ್ರಾಹಕರು ಕಂಗಾಲಾಗಿದ್ದಾರೆ. ಕೆಲವು ಕಡೆ ಹೋಟೆಲ್ ಮಾಲೀಕರು ನಾಳೆ ಹಣ ಕೊಡಿ ಎನ್ನುತ್ತಿದ್ದಾರೆ. ಇದರಿಂದ ಬಹುತೇಕ ಹೋಟೆಲ್ ಗಳಲ್ಲಿ ಶೇ.50ರಷ್ಟು ವಹಿವಾಟು ಕುಸಿತವಾಗಿದೆ.


ಚಿಲ್ಲರೆಗಾಗಿ ಪರದಾಟ ಹಿನ್ನೆಲೆಯಲ್ಲಿ ಹಲವೆಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿದೆ. ಬಸ್ ಗಳಲ್ಲಿ ಬಸ್ ನಿರ್ವಾಹಕರು ಚಿಲ್ಲರೆ ಇಲ್ಲದೆ 500 ಮತ್ತು 1000 ಮುಖಬೆಲೆ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದ ದೂರದ ಊರುಗಳಿಗೆ ತೆರಳಬೇಕಾದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.


0 comments:

Post a Comment