ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನಮ್ಮ ಪ್ರತಿನಿಧಿ ವರದಿ

ಕಳೆದ ಒಂದು ತಿಂಗಳಿನಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜೆ ಜಯಲಲಿತಾ  ನಿಧನರಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಡಿ.4 ರಂದು ಸಂಜೆ ವೇಳೆಗೆ ಹೃದಯಾಘಾತ ಸಂಭವಿಸಿತ್ತು. ನಿನ್ನೆಯಿಂದ ಅಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ.
 ಜಯಲಲಿತಾ ಅವರು ಯಾವುದೇ ರೀತಿಯ ಚಿಕಿತ್ಸೆಗೆ  ಸ್ಪಂದಿಸುತ್ತಿಲ್ಲ.  ಸದ್ಯ ಜಯ ಅವರು ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ.  ಸೆ.22ರರಂದು ಜಯಾ ಅವರು ಜ್ವರದ ಸಮಸ್ಯೆ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.
ಜಯಾಗೆ ನೀಡುತ್ತಿರುವ ಆಹಾರದಲ್ಲಿ ಏರುಪೇರಾಗಿ ಹೃದಯಾಘಾತವಾಗಿತ್ತು. ಪ್ರೋಟಿನ್ ನಲ್ಲಿ ಪೊಟ್ಯಾಷಿಯಂ ಹೆಚ್ಚಳವಾಗಿ, ರಕ್ತ ಸಂಚಾರದಲ್ಲಿ ವ್ಯತ್ಯಾಸವಾಗಿತ್ತು.
ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಪೋಲೋ ಆಸ್ಪತ್ರೆ ಎದುರುಗಡೆ ಅಮ್ಮ ಅಭಿಮಾನಿಗಳ ಆಕ್ರಂದನ ಮುಗಿಲುಮಟ್ಟಿದೆ.

ಅಂಗಡಿ ಮುಂಗಟ್ಟು ಬಂದ್
ಚೆನ್ನೈನ ಫುಟ್ ಪಾತ್ ನಲ್ಲಿರುವ ಅಂಗಡಿಮುಂಗಟ್ಟು ಬಂದ್ ಮಾಡಲಾಗಿದೆ. ಟಿ.ನಗರದ ಉಸ್ಮಾನ್ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ.
ತಮಿಳುನಾಡಿನಲ್ಲಿ 1 ಲಕ್ಷ ಪೊಲೀಸರು ಕಾರ್ಯಾನಿರ್ವಹಣೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಮೀಸಲು ಪಡೆ ಸೇರಿ 1 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಮ್ಮಾ ಅಭಿಮಾನಿಗಳ ನಿಯಂತ್ರಣಕ್ಕೆ ಎಚ್ಚರಿಕೆ ವಹಿಸಲಾಗಿದೆ. ಪಲ್ಲಾವರಮ್ ಆರ್ಮಿ ಕ್ಯಾಂಪ್ ಗೆ ಸಿದ್ಧವಿರಲು ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾರ್ಯನಿರ್ವಹಣೆಗೆ 1 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸಿಎಂ ಜಯಲಲಿತಾ ಅವರ ಆರೋಗ್ಯ ಗಂಭೀರ ಹಿನ್ನೆಲೆಯಲ್ಲಿ  ತಮಿಳುನಾಡಿನ ಮುಂದಿನ ಸಿಎಂ ಆಗಿ ಮನ್ನೀರ್ ಸೆಲ್ವ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಆಡಳಿತ ಪಕ್ಷದ 136 ಶಾಸಕರು ಪನ್ನೀರ್ ಗೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಶಾಸಕರ ಸಹಿ ಸಂಗ್ರಹ ಅಪೋಲೋ ಆಸ್ಪತ್ರೆಗೆ ಹೋಗಿದೆ. ಸಂಜೆ 6 ಗಂಟೆಗೆ ನಡೆಯುವ ಶಾಸಕರ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ಕನ್ನಡದ ನಂಟು
ಜೆ ಜಯಲಲಿತಾ ಅವರು ಫೆಬ್ರವರಿ, 24, 1948ರಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಜನನವಾಗಿತ್ತು. ಇವರ ತಂದೆ ಜಯರಾಮ್ ಮತ್ತು ತಾಯಿ ಸಂಧ್ಯಾ(ಚಿತ್ರನಟಿ). ಜಯಲಲಿತಾಗೆ 4 ವರ್ಷವಿದ್ದಾಗ ತಂದೆ ಮೃತಪಟ್ಟಿದ್ದರು. ಅಮ್ಮು ಎಂದು ಜಯಲಲಿತಾರನ್ನು ಮನೆಯರು ಕರೆಯುತ್ತಿದ್ದರು.

ಜಯಲಲಿತಾ ಅವರು ಚಿತ್ರನಟಿಯಾಗುಯೂ ನಟಿಸಿದ್ದು, 15 ವರ್ಷದ ಹುಡುಗಿಯಾಗಿದ್ದಾಗ ಚಿತ್ರರಂಗ ಪ್ರವೇಶಿಸಿದ್ದರು. ಶಾಸ್ತ್ರೀಯ ಸಂಗೀತ, ನೃತ್ಯ, ಗಾಯನದಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ನೃತ್ಯ ಪ್ರದರ್ಶನ ನೀಡಿ ಸರ್ಕಾರಿ ಶಾಲೆಗೆ ದೇಣಿಗೆ ನೀಡುತ್ತಿದ್ದರು. ಕನ್ನಡದಲ್ಲಿ 5 ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ 'ಚಿನ್ನದ ಗೊಂಬೆ' ಕನ್ನಡದಲ್ಲಿ ಜಯ ಅಭಿನಯಿಸಿದ ಮೊದಲ ಚಿತ್ರವಾಗಿದೆ. ಹಾಗೆಯೇ ಮನೆ ಅಳಿಯ, ಚಿನ್ನದ ಗೊಂಬೆ, ನನ್ನ ಕರ್ತವ್ಯ, ಮಾವನ ಮಗಳು ಮತ್ತು ಬದುಕುವ ದಾರಿ ಜಯ ಅಭಿನಯಿಸಿದ ಕನ್ನಡ ಚಿತ್ರವಾಗಿದೆ.

0 comments:

Post a Comment