ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನಮ್ಮ ಪ್ರತಿನಿಧಿ ವರದಿ
ಕಂಬಳ ಸಾಂಸ್ಕೃತಿಕ ಕ್ರೀಡೆಯಾಗಿದ್ದು,  ನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ರೈತರು ಕಂಬಳದ ಕೋಣಗಳನ್ನು ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ಸಾಕುತ್ತಾರೆ, ಇಲ್ಲಿ ಹಿಂಸೆಯ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಬಳದಿಂದಾಗಿ ದೇಶೀ ತಳಿಗಳು ಉಳಿದಿದ್ದು, ಕಂಬಳವನ್ನು ನಿಷೇಧಿಸಿದರೆ ಆ ತಳಿಗಳು ನಿಸ್ಸಂಶಯವಾಗಿ  ವಿನಾಶಹೊಂದುತ್ತವೆ. ಯಾವುದೇ ಸಾವು - ನೋವುಗಳ ನಿದರ್ಶನಗಳಿಲ್ಲದಿದ್ದರೂ  ಕಂಬಳದ ವಿರುದ್ಧವಾಗಿ  ಮಾತನಾಡವವರು, ಪ್ರಾಣಿಗಳ ಬಗ್ಗೆ ನೈಜ ಕಾಳಜಿ ಇದ್ದರೆ ಮೊದಲು ಕಾಸಾಯಿಖಾನೆಗನ್ನು ನಿಷೇಧಿಸಲು ಮುಂದಾಗಲಿ.
ಸಾಂಸ್ಕೃತಿಕ ಕ್ರೀಡೆಯಾದ ಕಂಬಳಕ್ಕೆ ಹವ್ಯಕ ಮಹಾಸಭೆಯ ಬೆಂಬಲವಿದ್ದು, ಕಂಬಳದ ನಿಷೇಧದ ವಿರುದ್ಧ ರಾಜಧಾನಿ ಕಂಬಳ ಕ್ರಿಯಾ ಸಮಿತಿಯವತಿಯಿಂದ ಜನವರಿ ೨೯ ರಂದು ಫ್ರೀಡಂ ಪಾರ್ಕಿನಲ್ಲಿ  ನಡೆಯುವ ಆಂದೋಲನಕ್ಕೆ ಹವ್ಯಕ ಮಹಾಸಭೆಯು ಬೆಂಬಲ ವ್ಯಕ್ತಪಡಿಸುತ್ತದೆ.

0 comments:

Post a Comment